ಕನ್ನಡ ಚಿತ್ರರಂಗವು ಶ್ರೀಮಂತ ಪರಂಪರೆಯುಳ್ಳ, ಕಲಾತ್ಮಕತೆಯಿಂದ ಕೂಡಿದ ಮತ್ತು ವೈವಿಧ್ಯಮಯ ಕಥಾನಕಗಳನ್ನು ಹೆತ್ತ ಪ್ರಮುಖ ಚಿತ್ರೋದ್ಯಮಗಳಲ್ಲಿ ಒಂದಾಗಿದೆ. ಈ ಪರಂಪರೆಯನ್ನು ಗೌರವಿಸಲು, ಕನ್ನಡ ಭಾಷಾ ಮತ್ತು ಸಂಸ್ಕೃತಿಯ ಮಹತ್ವವನ್ನು ಹಬ್ಬಿಸಲು ಮಾರ್ಚ್ 3 ರಂದು ಅಂದರೆ ಕನ್ನಡದ ಮೊದಲ ಟಾಕಿ ಚಿತ್ರ “ಸತಿ ಸುಲೋಚನಾ” ಮಾರ್ಚ್ 3, 1934 ರಂದು ಬಿಡುಗಡೆ ಮಡಿದ ಕರಣ ಆ ದಿನವನ್ನು “ವಿಶ್ವ ಕನ್ನಡ ಚಿತ್ರರಂಗ ದಿನ” (World Kannada Cinema Day) ಅನ್ನು ಪ್ರತಿವರ್ಷ ಆಚರಿಸುವ ಪ್ರಯತ್ನ ಮಾಡಲಾಗಿದೆ.

ಕನ್ನಡ ಚಿತ್ರರಂಗವು ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ ನಾಗ್, ಗಿರೀಶ್ ಕಾಸರವಳ್ಳಿ, ಪುತ್ತಣ್ಣ ಕಣಗಾಲ್, ಅಂಬರೀಷ್ ಮುಂತಾದ ಹಲವಾರು ಪ್ರತಿಭಾನ್ವಿತ ಕಲಾವಿದರು, ನಿರ್ದೇಶಕರು, ತಂತ್ರಜ್ಞರನ್ನು ಕಲ್ಪಿಸಿರುವ ಕ್ಷೇತ್ರ. ಆದರೆ, ಈ ಚಿತ್ರರಂಗದ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಮೆರೆಯಲು ಇನ್ನಷ್ಟು ಪ್ರಚಾರ ಅಗತ್ಯವಿದೆ.
“ವಿಶ್ವ ಕನ್ನಡ ಚಿತ್ರರಂಗ ದಿನ” ಆಚರಣೆಯ ಉದ್ದೇಶ:
- ಕನ್ನಡ ಚಲನಚಿತ್ರಗಳ ಪರಂಪರೆಯನ್ನು ಜಾಗತಿಕವಾಗಿ ಪರಿಚಯಿಸುವುದು.
- ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು.
- ಕನ್ನಡ ಸಿನೆಮಾ ಮತ್ತು ಸಾಂಸ್ಕೃತಿಕ ಪರಂಪರೆಯ ಕುರಿತಾಗಿಯೂ ಸಂಶೋಧನೆ, ಚರ್ಚೆ, ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನ ಹಮ್ಮಿಕೊಳ್ಳುವುದು.
- ಕನ್ನಡ ಚಿತ್ರೋದ್ಯಮಕ್ಕೆ ಹೊಸ ತಂತ್ರಜ್ಞಾನ, ಮಾರ್ಕೆಟಿಂಗ್ ವಿಧಾನಗಳ ಪ್ರವೇಶ ಒದಗಿಸುವುದು.
ಈ ದಿನವನ್ನು ಕನ್ನಡ ಚಿತ್ರರಂಗದ ಇತಿಹಾಸ, ಸಾಧನೆಗಳ ಕುರಿತು ಸಂವಾದ, ಚಲನಚಿತ್ರ ಪ್ರದರ್ಶನಗಳು, ಹಾಗೂ ಕನ್ನಡ ಸಿನಿ ಪುರಸ್ಕಾರ ಸಮಾರಂಭಗಳ ಮೂಲಕ ವಿಶೇಷವಾಗಿ ಆಚರಿಸಬಹುದು. ಪ್ರಪಂಚದಾದ್ಯಂತ ಕನ್ನಡಾಭಿಮಾನಿಗಳು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕನ್ನಡ ಚಲನಚಿತ್ರರಂಗವನ್ನು ಉತ್ತೇಜಿಸಬಹುದು.
ಕನ್ನಡ ಚಿತ್ರರಂಗದ ಬೆಳವಣಿಗೆಯು ಮುಂದಿನ ತಲೆಮಾರುಗಳಿಗೆ ಪ್ರೇರಣೆ ನೀಡಬೇಕು. ಈ ಹಬ್ಬದ ಮೂಲಕ ಕನ್ನಡ ಸಿನಿಮಾ ಸಂಸ್ಕೃತಿಯನ್ನು ಜಾಗತಿಕವಾಗಿ ಹರಡುವ ಒಂದು ಮಹತ್ತ್ವದ ಹೆಜ್ಜೆ ಇಡಬಹುದು. ಆದ್ದರಿಂದ, ಎಲ್ಲರೂ ವಿಶ್ವ ಕನ್ನಡ ಚಿತ್ರರಂಗ ದಿನವನ್ನು ಉತ್ಸಾಹಭರಿತವಾಗಿ ಆಚರಿಸೋಣ!

